Monday, April 30, 2012

ಮೇ ೧ ಕಾರ್ಮಿಕರ ದಿನ

  

ಕಾರ್ಮಿಕ ಚಳವಳಿಯ ನೆನಪಿಗಾಗಿ ಮೇ ೧ ಕಾರ್ಮಿಕರ ದಿನ ವಾಗಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಆಚರಿಸಲ್ಪಡುತ್ತದೆ.೧೮೬೦ರಿಂದ ದಿನವೊಂದಕ್ಕೆ ೮ ಗಂಟೆಗಳ ಕೆಲಸವನ್ನು ನಿಗದಿಗೊಳಿಸಬೇಕೆಂಬ ಚಳವಳಿ ಆರಂಭವಾಯಿತು.ಅಮೆರಿಕ, ಕೆನಡಾ ದೇಶಗಳಲ್ಲಿ ಕಾರ್ಮಿಕ ಸಂಘಟನೆಗಳು ಅಸ್ತಿತ್ವಕ್ಕೆ ಬಂದವು.ದಿನವೊಂದಕ್ಕೆ ೧೦,೧೨,೧೪ ಗಂಟೆಗಳ ಕಾಲ ಬಲವಂತವಾಗಿ ದುಡಿಸಿಕೊಳ್ಳುವುದನ್ನು ಈ ಸಂಘಟನೆಗಳು ವಿರೋಧಿಸಿದವು.ಶಿಕಾಗೋ ಸಾವಿರಾರು ಕಾರ್ಮಿಕರ ಸಂಘಟನೆಗಳ ಕೇಂದ್ರವಾಯಿತು.೧೮೮೧ರ ಮೇ ೧ರಂದು ಮೊದಲ ಬಾರಿಗೆ,ದಿನಕ್ಕೆ ೮ ಗಂಟೆಗಳ ಕೆಲಸದ ಕಾನೂನನ್ನು ಜಾರಿಗೊಳಿಸಲಾಯಿತು.ಹೀಗಾಗಿ ಮೇ ೧ 

ಕಾರ್ಮಿಕರ ದಿನವಾಗಿ ಘೋಷಿತವಾಯಿತು.ಭಾರತದಲ್ಲಿ ೧೯೨೩ರಿಂದ ಮೇ ದಿನವನ್ನು ಆಚರಿಸಲಾಗುತ್ತಿದೆ.