Tuesday, August 16, 2011

ಹೀರೋ ಸೈಕಲ್ ಕೊಂಡ್ರೆ ಆರೋಗ್ಯ ವಿಮೆ ಉಚಿತ

   Hero Cycles    ಬೈಸಿಕಲ್ ಕೊಂಡ್ರೆ ಆರೋಗ್ಯ ವಿಮೆ ಉಚಿತವಾಗಿ ಪಡೆಯುವ ದಿನಾ ದೂರವಿಲ್ಲ. ಯಾಕಂದರೆ    ವಿಶ್ವದ  ಬೃಹತ್       ಸೈಕಲ್ ತಯಾರಿಕಾ ಕಂಪನಿ ಹೀರೋ ಸೈಕಲ್ಸ್ ಈ ಕುರಿತು ಕಾರ್ಯತಂತ್ರ ರೂಪಿಸುತ್ತಿದೆ.

ಕಂಪನಿಯು ಗ್ರಾಮೀಣ ಭಾಗದ ಬೈಸಿಕಲ್ ಸವಾರರಿಗೆ ಆರೋಗ್ಯ ವಿಮಾ ಸೌಲಭ್ಯ ನೀಡುವ ಕುರಿತು ವಿಮಾ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ.

ಸೈಕಲ್ ಸಾಲ: ಹೀರೋ ಸೈಕಲ್ಸ್ ಈಗಾಗಲೇ ಅಲಹಾಬಾದ್ ಮೂಲದ ಸೊನಾಟಾ ಫೈನಾನ್ಸ್ ನೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ಗ್ರಾಮೀಣ ಭಾಗದ ಗ್ರಾಹಕರು ವಾರಕ್ಕೆ ನೂರು ರು. ನೀಡುವ ಮೂಲಕ ಬೈಸಿಕಲ್ ತಮ್ಮದಾಗಿಸಿಕೊಳ್ಳಬಹುದು.

"ದೇಶದ ಸುಮಾರು 5 ಕೋಟಿ ಜನರಿಗೆ ಸೈಕಲ್ ಖರೀದಿಸಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಅವರ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಅವರು ವಾರಕ್ಕೆ ನೂರು ರು. ನೀಡಿ ಸೈಕಲ್ ಖರೀದಿಸಲು ಸಾಧ್ಯವಾಗುವಂತೆ ಸಣ್ಣ ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇನ್ನು ಅವರ ಆರೋಗ್ಯ ಭದ್ರತೆ ಕುರಿತು ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ" ಎಂದು ಹೀರೋ ಸೈಕಲ್ಸ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಮುಂಜಾಲ್ ಹೇಳಿದ್ದಾರೆ.

ಈಗಾಗಲೇ ಕಂಪನಿಯು ಈ ಕುರಿತು ಒಂದು ಸಾರ್ವಜನಿಕ ವಲಯ ಮತ್ತು ಒಂದು ಖಾಸಗಿ ಬ್ಯಾಂಕಿನೊಂದಿಗೆ ಮಾತುಕತೆ ನಡೆಸುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಕಂಪನಿ ನಿರಾಕರಿಸಿದೆ.

ದೇಶದಲ್ಲಿರುವ ಮಲ್ಟಿಬ್ರಾಂಡೆಡ್ ಡೀಲರ್ಷಿಪ್ ನಲ್ಲಿ ಹೀರೋ ಸೈಕಲ್ಸ್ ನ ಬೈಸಿಕಲ್ ಗಳು ದೊರಕುತ್ತಿವೆ. ಕಂಪನಿಯ 1,800 ರು.ನಿಂದ 3 ಸಾವಿರ ರು. ಆಸುಪಾಸಿನ ಸೈಕಲ್ ಗೆ ಹೆಚ್ಚಿನ ಬೇಡಿಕೆಯಿದೆ. ಕಳೆದ ಆರ್ಥಿಕ ವರ್ಷದಲ್ಲಿ ಕಂಪನಿಯು 53 ಲಕ್ಷ ಬೈಸಿಕಲ್ ಮಾರಾಟ ಮಾಡಿತ್ತು.
source-thatskannada.oneindia

No comments:

Post a Comment