ಎಷ್ಟೊ ಜನರಿಗೆ ಕೆಲಸದ ಕೌಶಲ್ಯವಿರುತ್ತದೆ, ಅದರ ಬಗ್ಗೆ ಜ್ಞಾನವಿರುತ್ತದೆ. ಆದರೆ ಸಂದರ್ಶನದಲ್ಲಿ ಪ್ರಶ್ನೆ ಕೇಳಿದಾಗ ಏನೂ ಹೇಳಲು ನೆನಪಿಗೆ ಬರುವುದಿಲ್ಲ, ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದ ಕೆಲಸ ಕೈ ತಪ್ಪಿ ಹೋಗುವುದು. ಸಂದರ್ಶನಕ್ಕೆ ಹೋಗುವಾಗ ಸ್ವಲ್ಪ ಪೂರ್ವ ತಯಾರಿ ಮಾಡಿಕೊಳ್ಳುವುದು ಒಳ್ಳೆಯದು. ಉದ್ಯೋಗದ ಸಂದರ್ಶನಕ್ಕೆ ಹೋಗುವಾಗ ಈ ಕೆಳಗಿನಂತೆ ತಯಾರಿ ನಡೆಸಿದರೆ ಕೆಲಸ ದೊರೆಯುವುದು ಕಷ್ಟದ ಕೆಲಸವಲ್ಲ.
ತಯಾರಿ: ಒಂದು ಕಂಪನಿ ಅಥವಾ ಸಂಸ್ಥೆಗೆ ಕೆಲಸಕ್ಕೆ ಅರ್ಜಿ ಹಾಕಿ ಅಲ್ಲಿಂದ ಸಂದರ್ಶನಕ್ಕೆ ಕರೆ ಬಂದರೆ ಆ ಕಂಪನಿ ಬಗ್ಗೆ ತಿಳಿದುಕೊಳ್ಳಬೇಕು. ಇದಕ್ಕಾಗಿ ಕಂಪನಿ ವೆಬ್ ಸೈಟ್‌ಗೆ ಹೋಗಿ ಅದರಲ್ಲಿ ಕಂಪನಿ ಬಗ್ಗೆ ಇರುವ ವಿವರಗಳನ್ನು ಓದಿಕೊಂಡರೆ ಸಾಕು. ಆ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿರುವರ ವ್ಯಕ್ತಿ ಪರಿಚಯವಿದ್ದರೆ ಅದನ್ನು ಓದಿಕೊಳ್ಳುವುದು ಒಳ್ಳೆಯದು. ಈ ರೀತಿ ಮಾಡಿದರೆ ಸಂದರ್ಶನದಲ್ಲಿ ಕಂಪನಿ ಬಗ್ಗೆ ಏನಾದರೂ ಕೇಳಿದರೆ ಸುಲಭವಾಗಿ ಉತ್ತರಿಸಬಹದು.
ಸಂದರ್ಶನ ಎದುರಿಸುವಾಗ ಒತ್ತಡದಲ್ಲಿರಬಾರದು: ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗಳಿಗೆ ಸಾವಧಾನವಾಗಿ, ಸ್ಪಷ್ಟವಾಗಿ ಉತ್ತರ ಹೇಳಬೇಕು. ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾದವರಂತೆ, ಒತ್ತಡಕ್ಕೆ ಒಳಪಟ್ಟವರಂತೆ ತೋರಿಸಿಕೊಳ್ಳಬಾರದು. ಅದಕ್ಕಾಗಿ ಹೇಗೆ ಸಂದರ್ಶನವನ್ನು ಎದುರಿಸಬೇಕೆಂಬ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಕೈಗಳ ಉಗುರಗಳನ್ನು ಕತ್ತರಿಸಿರಬೇಕು. ಶೂಗಳಿಗೆ ಪಾಲಿಷ್ ಮಾಡಿರಬೇಕು. ಪುರುಷರಾದರೆ ಸೇವ್ ಮಾಡಿ, ಕೂದಲನ್ನು ಒಪ್ಪವಾಗಿ ಬಾಚಿಕೊಂಡಿರಬೇಕು. ಮಹಿಳೆಯರಾದರೆ ಸೆಲ್ಟಾರ್ ಅಥವಾ ಸ್ಯಾರಿ ಹಾಕಬಹುದು. ಮಲ್ಟಿನ್ಯಾಷನಲ್ ಕಂಪನಿಗಳಿಗೆ ಹೋಗುವುದಾದರೆ ಸೂಟ್ ಧರಿಸುವುದು ಒಳ್ಳೆಯದು.
ಮರು ಪರೀಕ್ಷೆ: ಸಂದರ್ಶನಕ್ಕೆ ಹೊರಡುವ ಮುನ್ನ ನಿಮ್ಮ ರೆಸ್ಯೂಮೆ (ವೈಯಕ್ತಿಕ ವಿವರವಿರುವ ಫೈಲ್) ಅನ್ನು ಎಲ್ಲಾ ಸರಿಯಾಗಿದೆಯೇ ಎಂದು ಮತ್ತೊಮ್ಮೆ ಪರೀಕ್ಷಿಸಬೇಕು. ಸಂದರ್ಶಕ್ಕೆ ಹೋಗುವಾಗ ಇತರ ಎಲ್ಲಾ ಡಾಕ್ಯೂಮೆಂಟ್ಸ್ ಇದೆಯೇ ಎಂದು ಪರೀಕ್ಷಿಸಿ ಜೊತೆಗೆ ಕೊಂಡೊಯ್ಯಬೇಕು. ಈ ಎಲ್ಲಾ ತಯಾರಿಗಳ ಜೊತೆ ಮುಖ್ಯವಾದ ಅಂಶವೆಂದರೆ ಆತ್ಮವಿಶ್ವಾಸ ಇರಬೇಕು. ಆಗ ಸಂದರ್ಶನವನ್ನು ಸುಲಭದಲ್ಲಿ ಎದುರಿಸಬಹುದು. by: Reena

courtesy--oneindia.com
No comments:
Post a Comment