ಏಕರೂಪ ಚೆಕ್ ವ್ಯವಸ್ಥೆ ಜಾರಿ ಮಾಡಬೇಕೆನ್ನುವುದು ಸುಮಾರು ಎರಡು ದಶಕಗಳ ಸರ್ಕಸ್ಸು. ಈಗದಕ್ಕೆ ಜಯ ದೊರೆತಿದೆ. ಪರಿಣಾಮ ನಾವು ಬಳಸುವ ಚೆಕ್ ಬದಲಾಗುತ್ತಿದೆ. ಹೊಸ ವಿನ್ಯಾಸ, ಹೊಸ ಸೌಲಭ್ಯ ಸೇರ್ಪಡೆಯೊಂದಿಗೆ ಜನವರಿಯಲ್ಲಿ ನಿಮ್ಮ ಕೈ ಸೇರಲಿದೆ. ಗೊತ್ತಿರಬೇಕಾದ ವಿಷಯ ಎಂದರೆ ಹೊಸ ಚೆಕ್‌ನಲ್ಲಿ ವಹಿವಾಟು ಮಾಡಬೇಕಾದರೆ ಮೊತ್ತ, ದಿನಾಂಕ, ಹೆಸರುಗಳನ್ನು ತಿದ್ದಿ, ತೀಡುವಂತಿಲ್ಲ. ನಿಮ್ಮ ಸಹಿ ಎಡವಟ್ಟಾಗುವಂತಿಲ್ಲ.
*ತಿದ್ದುವಂತಿಲ್ಲ *ನಕಲು ಮಾಡುವಂತಿಲ್ಲ *ಮೋಸಕ್ಕೆ ಅವಕಾಶ ಇಲ್ಲ *ಸಹಿ ತಪ್ಪಿದರೆ ಪಾವತಿ ಇಲ್ಲ
ನೀವು ಬಳಸುವ ಚೆಕ್‌ಗಳು ಬದಲಾಗುತ್ತಿವೆ. ಬದಲು ಏಕೆ ಅನ್ನೋದು ಬಹಳ ಮುಖ್ಯ. ಗ್ರಾಹಕರಿಗೆ ಸುಲಭವಾಗಿ, ಬಹು ಬೇಗ ಚೆಕ್‌ಗಳು ಕ್ಲಿಯರ್ ಆಗಲಿ ಎನ್ನುವುದು ನಿಜವಾದ ಉದ್ದೇಶ. ಇದರ ಜೊತೆಗೆ ಚೆಕ್‌ಗಳಲ್ಲಿ ಆಗುತ್ತಿರುವ ಮೋಸ ತಡೆಗಟ್ಟಲು ಇಡೀ ರಾಷ್ಟ್ರದಲ್ಲಿ ಏಕರೂಪ ಚೆಕ್ ವ್ಯವಸ್ಥೆ ಜಾರಿ ಮಾಡಲು ಎಲ್ಲ ಬ್ಯಾಂಕ್‌ಗಳು ತುದಿಗಾಲಲ್ಲಿ ನಿಂತಿವೆ. ಬೆಂಗಳೂರಿನ ಚೆಕ್ ಬಾಂಬೆಯಲ್ಲೂ, ಡೆಲ್ಲಿಯ ಚೆಕ್ ಅನ್ನು ಹೊಸನಗರದಲ್ಲೂ ಹಾಕಬಹುದು. ಹೊಸ ವರ್ಷದ, ಮೊದಲ ತಿಂಗಳಿಂದಲೇ ಈ ವ್ಯವಸ್ಥೆ ಜಾರಿಯಾಗಲಿದೆ. ಜಾರಿಯಾಲು ಕಾರಣ ಇನ್ನಷ್ಟು.
ಕರಿಂಲಾಲ್ ತೆಲಗಿ ಗೊತ್ತಲ್ಲ. ನಕಲಿ ಸ್ಟಾಂಪ್‌ಪೇರ್ ಗುರು. ಈತನ ಬಲೆಯಿಂದ ಹೊರ ಬರಲು ಸರ್ಕಾರ ಪ್ರಾರಂಭಿಸಿದ್ದು ಇ ಸ್ಟಾಂಪಿಂಗ್ ವ್ಯವಸ್ಥೆ. ಇದರಲ್ಲಿರುವ ಬಾರ್‌ಕೋಡ್ ತಂತ್ರವನ್ನು ಚೆಕ್‌ನಲ್ಲೂ ಬಳಕೆಮಾಡುತ್ತಿದ್ದಾರೆ. ಸ್ಟಾಂಪ್ ಪೇಪರ್ ಅನ್ನು ಜೆರಾಕ್ಸ್ ಮಾಡಿದರೆ ಹೇಗೆ ಇದು ನಕಲು ಅನ್ನೋದು ಗೊತ್ತಾಗುತ್ತದೋ ಅದೇ ರೀತಿ ಇನ್ನು ಮುಂದೆ ಚೆಕ್‌ಅನ್ನು ನಕಲು ಮಾಡಲು ಆಗುವುದಿಲ್ಲ. VOಐಈ ಗುರುತಿನ ಪೆಂಟೋಗ್ರಾಫ್ ಚೆಕ್‌ನಲ್ಲಿರುವುದರಿಂದ ಕಲರ್ ಜೆರಾಕ್ಸ್ ಮಾಡಿ ಟೋಪಿ ಹಾಕುವುದು ಕಷ್ಟ. ಕಷ್ಟ.
ನಮ್ಮ ಬ್ಯಾಂಕಿಂಗ್ ವ್ಯವಹಾರ ಶುರುವಾಗಿ ಒಂದು ಶತಮಾನವಾಗಿದೆ. ಹಾಗಂತ ವಂಚನೆ, ಮೋಸಗಳಿಂದ ಮುಕ್ತವಾಗಿಲ್ಲ. ಸಂಲೇಖನಾ ಕಾಯ್ದೆ ಸುಮಾರು 8-10 ಬಾರಿ ತಿದ್ದುಪಡಿಯಾಗಿದೆ. ಇಷ್ಟಾದರೂ 100ಕ್ಕೆ 100ರಷ್ಟು ದೋಷಮುಕ್ತವಾಗಿಲ್ಲ.
32 ಲಕ್ಷ ಚೆಕ್‌ಗಳು
ಬೆಂಗಳೂರಿನಲ್ಲಿ ದಿನವೊಂದಕ್ಕೆ 17ರಿಂದ 32 ಲಕ್ಷ ಚೆಕ್ ಕ್ಲಿಯರಿಂಗ್‌ಗೆ ನಿಲ್ಲುತ್ತವೆ. ಇದೇ ರೀತಿ ಸರಾಸರಿ ಒಂದು ಲಕ್ಷ ಡಿ.ಡಿ.ಗಳು ಕ್ಲಿಯರಿಂಗ್ ಹೌಸ್, (ಬ್ಯಾಂಕರ್‌ಗಳ ಚೆಕ್ ವಿನಿಮಯ ಕೇಂದ್ರ)ನಲ್ಲಿ ಸಂಗ್ರಹವಾಗುತ್ತಿವೆ. ಅವುಗಳನ್ನು ಬಟವಾಡೆಗೆ ಆಯಾ ಬ್ಯಾಂಕುಗಳಿಗೆ ನೀಡಲಾಗುತ್ತದೆ. ಈ ಚೆಕ್‌ಗಳನ್ನು ಬೇರೆ ಬೇರೆ ಬ್ಯಾಂಕುಗಳು ತನ್ನ ಪ್ರತಿನಿಧಿಯೊಂದಿಗೆ ಭೌತಿಕವಾಗಿ ಕ್ಲಿಯರಿಂಗ್ ಹೌಸ್‌ನಲ್ಲಿ ನೀಡಿದರೆ, ಆ ಚೆಕ್‌ಗಳ ಒಟ್ಟು ಮೊತ್ತಕ್ಕೆ ಕ್ಲಿಯರೆನ್ಸ್ ನೀಡಿ, ಬ್ಯಾಂಕುಗಳು ಗ್ರಾಹಕರ ಖಾತೆಗೆ ಹಣ ಜಮಾ ಮಾಡಲು ಸೂಚನೆ ನೀಡುತ್ತಿವೆ.
ಯಾವುದೇ ಚೆಕ್‌ಗಳ ಖಾತೆಗಳಲ್ಲಿ ಹಣವಿಲ್ಲದೆ ವಾಪಸ್ ಆಗುವ ಪ್ರಮೇಯವಿದ್ದರೆ ಕೂಡಲೇ ತಿಳಿಸಬೇಕಾದ ತಂತ್ರಾಂಶ ವ್ಯವಸ್ಥೆ ಜಾರಿಯಲ್ಲಿದ್ದು, ಆ ಚೆಕ್‌ಗಳನ್ನು ಕ್ಲಿಯರಿಂಗ್ ಹೌಸ್‌ಗೆ ನೀಡಿದ ಆ ಬ್ಯಾಂಕಿಗೆ ವಾಪಸ್ ಮಾಡುವಾಗ ಪ್ರತಿ ಚೆಕ್‌ಗೂ ಮೆಮೋ ಲಗತ್ತಿಸಿ, ಕಳುಹಿಸುವ ವ್ಯವಸ್ಥೆ ಜಾರಿಯಲ್ಲಿದೆ. ಇದಕ್ಕೆ ಶುಲ್ಕವನ್ನು ಆ ಖಾತೆದಾರ ನೀಡಬೇಕಾಗುತ್ತದೆ. ಹೊಸ ಚೆಕ್ ವ್ಯವಸ್ಥೆಯಲ್ಲಿ ಇದರ ಶೇ. 70ರಷ್ಟು ಕೆಲಸ ಕಡಿಮೆಯಾಗುತ್ತದೆ.
ಬೆಂಗಳೂರು ನಗರದಲ್ಲಿ ಈ ಬಾಬ್ತು ಪ್ರತಿ ದಿನ ನೂರಾರು ಕೋಟಿ ರೂ.ಗಳ ಬಟವಾಡೆ. ಪ್ರತಿದಿನವು ಈ ಬಟವಾಡೆಯಲ್ಲಿ ಏರಿಳಿಕೆ ಯಾಗುತ್ತಲೇ ಇರುತ್ತದೆ. ಇದೇ ಮಾದರಿಯ ಕ್ಲಿಯರಿಂಗ್ ಸೆಂಟರ್‌ಗಳು ದೇಶದ ಎಲ್ಲಾ ಬೃಹತ್ ನಗರಗಳು, ಜಿಲ್ಲಾ ಕೇಂದ್ರಗಳು ಮತ್ತು ಇತರೆ ದೊಡ್ಡ ದೊಡ್ಡ ನಗರಗಳಲ್ಲಿ ರಜಾ ದಿನಗಳನ್ನು ಹೊರತುಪಡಿಸಿ, ಉಳಿದ ದಿನಗಳಲ್ಲಿ ನಡೆಯುತ್ತಿರುತ್ತವೆ.
ಈಗಂತೂ ಚೆಕ್‌ಗಳು ಭದ್ರತಾ ದೃಷ್ಟಿಯಿಂದ ಕಣ್ಣಲ್ಲಿ ಕಣ್ಣಿಟ್ಟು ತಪಾಸಣೆ ಮಾಡುವ ವೈಯಕ್ತಿಕ ಶ್ರಮದೊಂದಿಗೆ ನಡೆಯುತ್ತಿದೆ. ಎರಡು ಮೂರು ದಿವಸ ರಜೆ ಇದ್ದರೆ ಗೋವಿಂದ. ಲಕ್ಷ ಲಕ್ಷ ಚೆಕ್, ಡಿಡಿಗಳು. ಚೂರು ವ್ಯತ್ಯಾಸ ಆದರೂ ಅವಘಡಗಳು ಸಂಭವಿಸುತ್ತವೆ.
ಈ ಕಾರಣಕ್ಕೆ ರಿಸರ್ವ್‌ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಬೃಹತ್ ಬ್ಯಾಂಕುಗಳ ಮಹಾಒಕ್ಕೂಟ) ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಕಳೆದ 20 ವರ್ಷಗಳಿಂದಲೂ ಹೊಸ ಏಕರೂಪದ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸಿದ್ದವು. ಚೆಕ್‌ಗಳ ಬುಡದಲ್ಲಿ ಆಯಸ್ಕಾಂತದ ಪಟ್ಟಿಯನ್ನು ಬಳಕೆ ಮಾಡಿ, ಅದರಿಂದ ಕ್ಲಿಯರಿಂಗ್ ಚೆಕ್‌ಗಳ ತ್ವರಿತ ವಿಲೇವಾರಿಗೆ ಪ್ರಯತ್ನ ನಡೆಸಿದ್ದವು. ಈ ಪ್ರಯತ್ನ ಎರಡು ದಶಕಗಳಿಂದ ಇದ್ದರೂ ಉತ್ತಮ ಫಲಿತಾಂಶ ನೀಡಲಿಲ್ಲ.
ಇದಕ್ಕೆ ಪ್ರಮುಖ ಕಾರಣ ಚೆಕ್‌ಗಳಲ್ಲಿ ಏಕರೂಪ ವ್ಯವಸ್ಥೆ ಇರದೇ ಇರುವುದು. ಇದನ್ನು ಆರ್.ಬಿ.ಐ. ಮತ್ತು ಐ.ಬಿ.ಎ. ಒಟ್ಟಾಗಿ ಆದೇಶ ಮಾಡಿತು. ಇಡೀ ದೇಶದಲ್ಲಿ ಕ್ಲಿಯರಿಂಗ್‌ನಲ್ಲಿ ಭಾಗವಹಿಸುವ ಎಲ್ಲಾ ಸದಸ್ಯ, ಸಹ ಸದಸ್ಯ, ಉಪ ಸದಸ್ಯ ಬ್ಯಾಂಕುಗಳು ಕಡ್ಡಾಯವಾಗಿ ಯಾವುದೇ ಸಬೂಬು ಏಕರೂಪ ಸೆಕ್ಯೂರಿಟಿ ಮಾರ್ಕ್‌ಗಳನ್ನು ಅಳವಡಿಸಿ, ಹೊಸ ಚೆಕ್ ಹಾಳೆಗಳನ್ನು ಮುದ್ರಿಸಲು ದಿಟ್ಟವಾದ ಕ್ರಮ ತೆಗೆದು ಕೊಳ್ಳುವಂತೆ ಮಾಡಿತು. ಇದರ ಫಲವೇ ಹೊಸ ಚೆಕ್‌ಗಳು.
ಹೊಸ ವಿನ್ಯಾಸದ ಚೆಕ್‌ಗಳು ಹೇಗಿರಬೇಕು?
ಆ ಚೆಕ್‌ನ ಕಾಗದ ಗುಣಮಟ್ಟ ಹಿಂದೆಂದಿಗಿಂತಲೂ ಚೆನ್ನಾಗಿರಬೇಕು. ಜೊತೆಗೆ ವಾಟರ್‌ಮಾರ್ಕ್, ವಾಯ್ಡ ಗುರುತಿನ ಆಗೋಚರ ಪ್ಯಾಂಟೋಗ್ರಾಫ್ ಮಾರ್ಕ್ - ಈ ಎಲ್ಲಾ ಹೊಸ ವಿನ್ಯಾಸಗಳು ಬರಿಗಣ್ಣಿಗೆ ಕಾಣದ ರೀತಿಯಲ್ಲಿ ಮೈಕ್ರೊಸ್ಕೊಪಿಕ್ ಘಟಕದ ಮೂಲಕ ಮಾತ್ರ ನೋಡಲು ಸಾಧ್ಯವಿರುವಂತೆ ರೂಪಿತವಾಗಿದೆ. ಇದರೊಂದಿಗೆ ಸಿ.ಟಿ.ಎಸ್. ಚೆಕ್ ಟ್ರಾಂಜಾಕ್ಷನ್ ಸ್ಟ್ಯಾಂಡರ್ಡ್ -2010 ಎಂಬ ನಿಯಮಾವಳಿ ಅನ್ವಯ ಕೆಲವು ಗುಟ್ಟಾದ ಮಾರ್ಕ್‌ಗಳನ್ನು ಹೊಂದಿರುಲೇ ಬೇಕು. ಇದು ರಿಸರ್ವ್‌ಬ್ಯಾಂಕ್ ಕಾಯಿದೆ ಅಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕುಗಳಿಗೆ ಕಡ್ಡಾಯ. ಬ್ಯಾಂಕುಗಳೂ ಅಷ್ಟೇ ಜನವರಿಯಿಂದ ಈ ಹೊಸ ಚೆಕ್ ಚಾಲ್ತಿಗೆ ಬರುತ್ತದೆ ಎಂದರೆ ಎರಡು ತಿಂಗಳು ಮುಂಚೆಯೇ ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಯಾವುದೇ ಸಬೂಬು ಹೇಳಿ ತಪ್ಪಿಸಿ ಕೊಳ್ಳುವಂತಿಲ್ಲ. ಎಲ್ಲದರ ಮೇಲ್ವಿಚಾರಣೆ ಆರ್‌ಬಿಐ ಹೊತ್ತಿರುವುದರಿಂದ ಲಕ,ಲಕ ಹೊಳೆಯುವ ಹೊಸ ಚೆಕ್ ನಿಮ್ಮ ಕೈ ಸೇರುವುದು ಖರೆ.
ಹೆಸರು ಕಡ್ಡಾಯ
ಸಾಲ ನೀಡುವ ಸಂಘ-ಸಂಸ್ಥೆಗಳು, ಎನ್.ಬಿ.ಎಫ್.ಸಿ.ಗಳು ಗ್ರಾಹಕರಿಂದ ಪಡೆಯುವ ಚೆಕ್‌ಗಳು ಕಡ್ಡಾಯವಾಗಿ ಜನವರಿ-1ರಿಂದ ಸಿ.ಟಿ.ಎಸ್. ಮಾದರಿಯ ಹಾಳೆಗಳಾಗಿರಬೇಕು. ಅವುಗಳನ್ನು ಕ್ಲಿಯರಿಂಗ್ ಹೌಸ್‌ಗೆ ಬ್ಯಾಂಕ್ ಮೂಲಕ ಕಳುಹಿಸುವಂತಿರಬೇಕು.
ಹೊಸ ಚೆಕ್ ಹಾಳೆಯ ಎಡಭಾಗದಲ್ಲಿ ಬ್ಯಾಂಕ್/ಸಂಸ್ಥೆಯ ಹೆಸರನ್ನು ಮುದ್ರಿಸಲು ನಿಗದಿತ ಸ್ಥಳವಿದೆ. ಇದು ಕಡ್ಡಾಯ. ಕಳೆದ ದಶಕಕ್ಕೆ ಹೋಲಿಸಿದರೆ ವಿವಿಧ ಬ್ಯಾಂಕ್‌ಗಳು ಪ್ರತಿ ವರ್ಷ 4ರಿಂದ 5 ಸಾವಿರ ವಂಚನೆ ಕೇಸುಗಳನ್ನು ಎದುರಿಸುತ್ತಿದ್ದವು. ಆದರೆ ಇತ್ತೀಚೆಗೆ ಬ್ಯಾಂಕಿಂಗ್ ವ್ಯವಹಾರಗಳ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ 6-7 ಬ್ಯಾಂಕುಗಳು ಮಾತ್ರ ಹೆಚ್ಚಿನ ಬ್ಯಾಂಕ್ ವಂಚನೆಗಳಿಗೆ ಒಳಗಾಗಿವೆ. ಮುಂದಿನ ದಿನಗಳಲ್ಲಿ ಯಾವುದೇ ವಂಚಕರ ಜಾಲದಿಂದ, ಚೆಕ್‌ನ ಕಳ್ಳರಿಂದ ದೂರ ಉಳಿಯಬಹುದು. ಗ್ರಾಹಕರು ನಿರಾತಂಕವಾಗಿ ಬ್ಯಾಂಕುಗಳಲ್ಲಿ ವ್ಯವಹರಿಸಲು ಈ ಹೊಸ ವಿಧಾನ ಹೆಚ್ಚು ಉಪಯೋಗಕ್ಕೆ ಬರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಪ್ರಯತ್ನ ಸ್ವಲ್ಪ ದುಬಾರಿಯಾದರೂ, ಗ್ರಾಹಕರ ಹಿತದೃಷ್ಟಿಯ ಮುಂದೆ ಇದು ನಗಣ್ಯ ಎಂತಲೇ ಅನ್ನಬೇಕು.
ತಿದ್ದಬೇಡಿ
ಪರ ಊರು, ಲೋಕಲ್ ಅಂಥೆಲ್ಲಾ ಚೆಕ್‌ಗಳ ವಿಂಗಡಣೆ ಇನ್ನುಮುಂದೆ ಇರೋಲ್ಲ. ಹೊಸ ವ್ಯವಸ್ಥೆಯ ವಿಶೇಷ ಎಂದರೆ ನೀವು ಕೊಟ್ಟ ಚೆಕ್ಕನ್ನು ಪರೀಕ್ಷೆಗಾಗಿ ಆಲ್ಟ್ರಾವೈಲೆಟ್ ಲ್ಯಾಂಪ್ ಮುಂದೆ ಇಟ್ಟರೆ ಸಾಕು. ಅದೇ ಸಹಿ ಸರಿಯಾಗಿದೆಯೇ, ಅದು ನಿಮ್ಮದೇ ಚೆಕ್ಕಾ ಹೀಗೆ ನಿಮ್ಮ ಜಾತಕವನ್ನು ಮುಂದೆ ಹಾಕಿ ಕ್ಷಣ ಮಾತ್ರದಲ್ಲಿ ಹೇಳುತ್ತದೆ. ಒಂದು ಪಕ್ಷ ಚೆಕ್ಕನ್ನು ತಿದ್ದಿ, ತೀಡಿ ಯಡವಟ್ಟು ಮಾಡಿದ್ದರೆ ದೇವರಾಣೆ ಚೆಕ್ ಪಾಸ್ ಆಗೋಲ್ಲ.
ಯಂತ್ರ ರೆಡ್ ಅಲರ್ಟ್ ತೋರಿಸುತ್ತದೆ. ಅದಕ್ಕೆ ಹೆಸರು, ದಿನಾಂಕ, ಸಹಿ ತಪ್ಪು ಮಾಡಿ ವೈಟ್ನರ್ ಬಳಸಿ ತಿದ್ದಿದರೆ ಇನ್ನು ಮುಂದೆ ಚೆಕ್ ಕ್ಯಾರೇ ಅನ್ನಲ್ಲ.
ಸರ್ಕಾರಿ ಚೆಕ್‌ಗಳಿಗೆ ಬೇಗ ದುಡ್ಡು
ಎಲ್‌ಐಸಿ, ಡಿಡಿ, ದೊಡ್ಡ ವಹಿವಾಟಿನ ಕಂಪನಿ ಚೆಕ್‌ಗಳು, ಸರ್ಕಾರಿ ಚೆಕ್‌ಗಳು (ಟ್ರಸರಿ ಚೆಕ್ ಅಲ್ಲ). ಇವುಗಳನ್ನು ಹಾಕಿ ತುರ್ತು ಹಣ ಬೇಕು ಎಂದು ಮ್ಯಾನೇಜರ್‌ಗೆ ಮನವಿ ಮಾಡಿದರೆ ಡಿಸ್ಕೌಂಟ್ ಚಾರ್ಜ್ ಹಾಕಿ ತಕ್ಷಣ ಬ್ಯಾಂಕ್ ಹಣ ಸಂದಾಯ ಮಾಡುತ್ತದೆ. ಒಂದು ಪಕ್ಷ ಕರೆಂಟ್ ಅಕೌಂಟ್ ತುಂಬಾ ಭಾರವಾಗಿದ್ದರೆ ನೀವು ಚೆಕ್ ಕೊಟ್ಟ ತಕ್ಷಣ ಮ್ಯಾನೇಜರ್ ಹಣ ಸಂದಾಯ ಮಾಡಿಸುವ ಅಧಿಕಾರ ಇರುತ್ತದೆ. ಇದರ ಜೊತೆಗೆ ಟಿಓಡಿ ( ಟೆಂಪರರಿ ಓವರ್ ಡ್ರಾಫ್ಟ್) ವ್ಯವಸ್ಥೆಯೂ ಬ್ಯಾಂಕ್‌ಗಳಲ್ಲಿ ಇದೆ. ಇವೆಲ್ಲಾ ಶ್ರೀಮಂತರೂ, ದೊಡ್ಡ ಮಟ್ಟದ ವ್ಯವಹಾರ ಮಾಡುವವರಿಗೆ ಮಾತ್ರ. ಇಂಥವರಿಗೆ ತಕ್ಷಣ ಹಣಬೇಕು, ಬರಬೇಕಾದ ಮೊತ್ತ ಎರಡು ಮೂರು ದಿನದಲ್ಲಿ ಸಿಗುತ್ತದೆ ಎಂದಾದರೆ ಮ್ಯಾನೇಜರ್ ಟಿಓಡಿ ಅಡಿಯಲ್ಲಿ ಹಣ ಒದಗಿಸಲೂಬಹುದು. ಈ ಎಲ್ಲ ಸೌಲಭ್ಯ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಮಾತ್ರ. ಕೋ ಆಪರೇಟೀವ್ ಬ್ಯಾಂಕ್‌ಗಳಲ್ಲಿ ಇಲ್ಲ.
ಚೆಕ್‌ಗಳ ವಿನ್ಯಾಸ, ಸೆಕ್ಯುರಿಟಿ ವಿಚಾರಗಳನ್ನು ಗೌಪ್ಯವಾಗಿಡುವುದು, ಚೆಕ್‌ಗಳ ವಿತರಣೆಯನ್ನು ಎನ್‌ಸಿಪಿಐ (ನ್ಯಾಷನಲ್ ಕಾರ್ಪೊàರೇಷನ್ ಅಫ್ ಇಂಡಿಯಾ ) ಎಂಬ ಕಾರ್ಪೊರೇಟ್ ಸಂಸ್ಥೆ ವಹಿಸಿ ಕೊಂಡಿದೆ. ಇದು ಆರ್‌ಬಿಐ ಮತ್ತು ಐಬಿಎ ಸೂಚನೆಗಳೊಂದಿಗೆ ಕೆಲಸ ಮಾಡುತ್ತಿದೆ. ಈಗಾಗಲೇ ಎಸ್‌ಬಿಐ ಮುಂತಾದ ಅನೇಕ ಬ್ಯಾಂಕ್‌ಗಳು ಚೆಕ್ ಬದಲಾವಣೆಯ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಜನವರಿಯಿಂದ ಹೊಸ ಚೆಕ್ ವಿತರಣೆಗೆ ಸಜ್ಜು ಗೊಂಡಿದೆ. ಬಳಸಲು ನೀವು ರೆಡಿಯಾಗಿ.
ಚೆಕ್ ಬಿಫೋರ್ ಯೂಸ್
*ಒಂದೊಂದು ಬ್ಯಾಂಕು ಲಕ್ಷಾಂತರ ಉಳಿತಾಯ ಖಾತೆದಾರರು ಹೊಂದಿದೆ. ಒಟ್ಟಾರೆ 10 ಕೋಟಿಗೂ ಮೀರಿ ಗ್ರಾಹಕರಿಗೆ ಹೊಸ ಚೆಕ್ ಪುಸ್ತಕಗಳನ್ನು ವಿತರಿಸಬೇಕಾಗುತ್ತದೆ. ಬ್ಯಾಂಕುಗಳಿಗೆ ಭೇಟಿ ನೀಡುತ್ತಿರುವ ಗ್ರಾಹಕರಿಗೆ ಆಯಾ ಶಾಖೆಗಳಲ್ಲೇ ಹೊಸ ಚೆಕ್ ಪುಸ್ತಕಗಳನ್ನು ನೀಡುವ ವ್ಯವಸ್ಥೆಯಾಗಿದೆ.
*ಹೊಸ ಚೆಕ್‌ಗಳಲ್ಲಿ ಕಡ್ಡಾಯವಾಗಿ ವಾಟರ್‌ಮಾರ್ಕ್ ಸೇರಿಸಿರಬೇಕು. ಚೆಕ್ ಪುಸ್ತಕದ ಪೇಪರ್ ಸಿದ್ಧವಾಗುವ ಮೂಲದಲ್ಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆ. ಅದರಲ್ಲಿ ಸಿ.ಟಿ.ಎಸ್. ಇಂಡಿಯಾ ಎಂದು ಮುದ್ರಿತವಾಗಿರುತ್ತದೆ.
*ಈ ವಾಟರ್ ಮಾರ್ಕ್ 3x 2.6 ಸೆ.ಮೀ. ಗಾತ್ರದಲ್ಲಿ ಇರುತ್ತದೆ.
*ಗುರುತಿನ ಆಗೋಚರ ಮಾರ್ಕ್ ಚೆಕ್ ಹಾಳೆಯ ಎಡಭಾಗದಲ್ಲಿರುತ್ತದೆ. ಈ ಚೆಕ್‌ಗಳನ್ನು ಕಡುನೀಲಿ ಆಲ್ಟ್ರಾವೈಲಟ್ ದೀಪದಡಿ ಪರೀಕ್ಷಿಸಿದಾಗ ಆರ್.ಬಿ.ಐ. ಸೂಚಿಸಿರುವ ಎಲ್ಲಾ ಗೌಪ್ಯ ಭದ್ರತಾ ವಿಚಾರಗಳು ಸರಿ ಇದೆಯಾ ಎನ್ನುವುದು ತಿಳಿಯುತ್ತದೆ.
*ಚೆಕ್ ಹಾಳೆಯಲ್ಲಿ ಶೇ.60ರಷ್ಟು ಮಾತ್ರ ಹೊಸ ವಿನ್ಯಾಸಗಳಿರುತ್ತದೆ. ಕ್ಲಿಯರಿಂಗ್‌ನಲ್ಲಿ ಸುಲಲಿತವಾಗಿ ಚೆಕ್ ಪಾಸಾಗುವಂತೆ ಬ್ಯಾಂಕುಗಳು ಚೆಕ್‌ನ ಸೈಜನ್ನು ನಿಗದಿಪಡಿಸಿವೆ.
*ಇಲ್ಲಿ ಬಳಕೆಯಾಗುವ ಇಂಕ್‌ಗಳು ವೈಯಕ್ತಿಕ ಬ್ಯಾಂಕಿನ ವಿವರಗಳು, ಲಾಂಛನ, ರೂಪಾಯಿ ಅಕ್ಷರದಲ್ಲಿ ಮತ್ತು ಅಂಕಿಯಲ್ಲಿ ಬರೆಯಲು ಸೂಕ್ತ ಸ್ಥಳ ನಿಗದಿಯನ್ನು ಎನ್.ಸಿ.ಪಿ.ಐ. ಸೂಚನೆಯಂತೆ ಸಿದ್ದಗೊಂಡಿವೆ.
*ಚೆಕ್‌ನ ಮೇಲೆ ಖಾತೆ ಸಂಖ್ಯೆಯನ್ನು ಯಾವುದೇ ಕಾರಣಕ್ಕೂ ಶಾಹಿಯಲ್ಲಿ ಬರೆಯುವಂತಿಲ್ಲ. ಅದಕ್ಕೆ ಸ್ಟ್ಯಾಂಪ್ ಅಥವಾ ಮುದ್ರಿಸುವ ವ್ಯವಸ್ಥೆ ಮಾಡಲು ಆರ್.ಬಿ.ಐ. ಅನುಮತಿ ನೀಡಿದೆ.
*ಖಾತೆದಾರರು ಸಹಿ ಮಾಡುವ ಸ್ಥಳವನ್ನು ಚೆಕ್‌ನಲ್ಲಿ ನಿಗದಿಗೊಳಿಸಲಾಗಿದ್ದು ಅದೂ ಸಹ, ಸಿ.ಟಿ.ಎಸ್. ಅನ್ವಯ ಅಂತರ್ ಮುದ್ರಣಗೊಂಡು ಆಲ್ಟ್ರಾವೈಲೆಟ್ ಲ್ಯಾಂಪ್‌ನಲ್ಲಿ ಪರೀಕ್ಷಿಸಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

-ಡಾ|| ಕೆ.ಪಿ. ಗುರುಸ್ವಾಮಿ - ಉದಯವಾಣಿ .
No comments:
Post a Comment