ಕಾರ್ಮಿಕ ಚಳವಳಿಯ ನೆನಪಿಗಾಗಿ ಮೇ ೧ ಕಾರ್ಮಿಕರ ದಿನ ವಾಗಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಆಚರಿಸಲ್ಪಡುತ್ತದೆ.೧೮೬೦ರಿಂದ ದಿನವೊಂದಕ್ಕೆ ೮ ಗಂಟೆಗಳ ಕೆಲಸವನ್ನು ನಿಗದಿಗೊಳಿಸಬೇಕೆಂಬ ಚಳವಳಿ ಆರಂಭವಾಯಿತು.ಅಮೆರಿಕ, ಕೆನಡಾ ದೇಶಗಳಲ್ಲಿ ಕಾರ್ಮಿಕ ಸಂಘಟನೆಗಳು ಅಸ್ತಿತ್ವಕ್ಕೆ ಬಂದವು.ದಿನವೊಂದಕ್ಕೆ ೧೦,೧೨,೧೪ ಗಂಟೆಗಳ ಕಾಲ ಬಲವಂತವಾಗಿ ದುಡಿಸಿಕೊಳ್ಳುವುದನ್ನು ಈ ಸಂಘಟನೆಗಳು ವಿರೋಧಿಸಿದವು.ಶಿಕಾಗೋ ಸಾವಿರಾರು ಕಾರ್ಮಿಕರ ಸಂಘಟನೆಗಳ ಕೇಂದ್ರವಾಯಿತು.೧೮೮೧ರ ಮೇ ೧ರಂದು ಮೊದಲ ಬಾರಿಗೆ,ದಿನಕ್ಕೆ ೮ ಗಂಟೆಗಳ ಕೆಲಸದ ಕಾನೂನನ್ನು ಜಾರಿಗೊಳಿಸಲಾಯಿತು.ಹೀಗಾಗಿ ಮೇ ೧
ಕಾರ್ಮಿಕರ ದಿನವಾಗಿ ಘೋಷಿತವಾಯಿತು.ಭಾರತದಲ್ಲಿ ೧೯೨೩ರಿಂದ ಮೇ ದಿನವನ್ನು ಆಚರಿಸಲಾಗುತ್ತಿದೆ.
ಮೇ ೧
ಪ್ರಮುಖ ಘಟನೆಗಳು
- ೧೩೨೮ - ಸ್ಕಾಟ್ಲೆಂಡ್ ಅನ್ನು ಇಂಗ್ಲೆಂಡ್ ಸ್ವತಂತ್ರ ರಾಷ್ಟ್ರವೆಂದು ಗುರುತಿಸಿತು.
- ೧೭೦೭ - ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ಒಂದುಗೂಡಿ ಯುನೈಟೆಡ್ ಕಿಂಗ್ಡಮ್ಅನ್ನು ರಚಿಸಿದವು.
- ೧೯೪೫ - ಎರಡನೇ ಮಹಾಯುದ್ಧದಲ್ಲಿ ಸೋವಿಯೆಟ್ ಒಕ್ಕೂಟ ಬರ್ಲಿನ್ ನಗರವನ್ನು ವಶಪಡಿಸಿಕೊಂಡಿತು.
- ೨೦೧೧-ಆಲ್ ಖೈದಾ ಭಯೋದ್ಪಾದಕರ ಸಂಘಟಕರ ಮುಂದಾಳು, ಒಸಾಮ ಬಿನ್ ಲಾಡೆನ್, ನನ್ನು ಅಮೆರಿಕದ ಸೈನ್ಯದ ಕಾರ್ಯಾಚರಣೆಯ ಯೋಧರು, ಪಾಕೀಸ್ತಾನದ ಬಳಿಯ ಅಬ್ಬಟಾಬಾದ್ ನ ಲಾಡೆನ್ ನ ಸ್ವಗೃಹ,ದಲ್ಲಿ ಕೊಂದ ಮಹತ್ವದ ದಿನ.
ಜನನ
- ೧೮೫೨ - ಸ್ಯಾಂಟೀಯೇಗೊ ರಮೋನ್ ಎ ಕಹಾಲ್, ಸ್ಪೈನ್ನ ನರವಿಜ್ಞಾನಿ ಮತ್ತು ನೊಬೆಲ್ ಪ್ರಶಸ್ತಿ ವಿಜೇತ.
ನಿಧನ
- ೧೮೭೩ - ಡೇವಿಡ್ ಲಿವಿಂಗ್ಸ್ಟೋನ್, ಸ್ಕಾಟ್ಲೆಂಡ್ನ ಪಾದ್ರಿ.
- ೧೯೦೪ - ಆಂಟೋನಿನ್ ಡ್ವೊರಾಕ್, ಚೆಕ್ ಗಣರಾಜ್ಯದ ಸಂಗೀತ ನಿರ್ದೇಶಕ.
ಹಬ್ಬಗಳು/ಆಚರಣೆಗಳು
- ವಿಶ್ವದಾದ್ಯಂತ ಕಾರ್ಮಿಕರ ದಿನವಾಗಿ ಆಚರಿಸಲ್ಪಡುತ್ತದೆ
- source----- ವಿಕಿಪೀಡಿಯ
No comments:
Post a Comment