Monday, June 6, 2011

ನಿಮ್ಮ ಲಂಚ್ ಬಾಕ್ಸ್ ನಲ್ಲಿ ಏನಿದೆ? ಏನೇನಿರಬೇಕು?


Eat Perfect Lunch      ಒಂದು ಮಾತಿದೆ. ಮುಂಜಾನೆ ರಾಜನಂತೆ ಹೊಟ್ಟೆ ತುಂಬಾ ತಿನ್ನಬೇಕು. ಅಪರಾಹ್ನದ ಊಟ ರಾಣಿಯಂತಿರಲಿ. ರಾತ್ರಿಯ ಊಟ ಮಗುವಿನಂತಿರಲಿ. ಈ ರೀತಿ ಆಹಾರ ಸೇವಿಸುವುದರಿಂದ ತೂಕ ಕಳೆದುಕೊಳ್ಳಬಹುದು ಅಥವಾ ಸರಿಯಾದ ತೂಕ ಹೊಂದಬಹುದು. ಆದರೆ ಹೆಚ್ಚಿನವರ ಆಹಾರ ಸೇವನೆ ಮೇಲೆ ತಿಳಿಸಿದ ರಾಜ ರಾಣಿ ಕಾನ್ಸೆಪ್ಟ್ ಗಿಂತ ಉಲ್ಟಾ ಆಗಿರುತ್ತದೆ.

ದಿನವಿಡಿ ಪ್ರಫುಲವಾಗಿರಲು ಬೆಳಗ್ಗೆ ಹೊಟ್ಟೆತುಂಬಾ ಊಟ ಮಾಡಬೇಕು. ಆದರೆ ಎಷ್ಟು ತಿಂದರೂ ಈ ಕೆಲಸದ ಒತ್ತಡದಲ್ಲಿ ಮಧ್ಯಾಹ್ನ ಹೊಟ್ಟೆ ಚುರ್ರೆನ್ನುತ್ತಿರುತ್ತದೆ. ಆಗ ಅಪರೂಪಕ್ಕೆ ಸಿಕ್ಕ ಮದುವೆ ಊಟದಂತೆ ಹೊಟ್ಟೆತುಂಬಾ ಆಹಾರ ಸೇವಿಸಿದರೆ ನೀವು ದಢೂತಿ ವ್ಯಕ್ತಿಯಾಗುತ್ತೀರಿ.

ದೇಹದ ತೂಕ ಕಳೆದುಕೊಳ್ಳಲು ಮಧ್ಯಾಹ್ನದ ಊಟ ಹೀಗಿರಲಿ

* ಮಧ್ಯಾಹ್ನ ಜಾಸ್ತಿ ತಿನ್ನಬಾರದು. ಆದರೆ ಜಾಸ್ತಿ ಕ್ಯಾಲೋರಿ ಇರುವ ಆಹಾರವನ್ನು ಸೇವಿಸಬೇಕು.

* ಮುಂಜಾನೆ ಹೊಟ್ಟೆತುಂಬಾ ಉಪಹಾರ ಸೇವಿಸಿರುತ್ತೀರಿ. ಮಧ್ಯಾಹ್ನ ಕಾರ್ಬೊಹೈಡ್ರೆಟ್ ಹೆಚ್ಚಿರುವ ಆಹಾರವನ್ನು ಸೇವಿಸಿರಿ. ಅಂದ್ರೆ ಕುಚ್ಚಲಕ್ಕಿ-ಕೆಂಪಕ್ಕಿ ಅನ್ನ, ಗೋಧಿ ರೊಟ್ಟಿ, ನೂಡಲ್ಸ್ ಇತ್ಯಾದಿಗಳನ್ನು ತಿನ್ನಬಹುದು.

ಇವೆಲ್ಲ ಹೆಚ್ಚು ನಾರಿನಾಂಶ ಹೊಂದಿರುವ ಆಹಾರವಾಗಿದ್ದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಮದ್ಯಾಹ್ನದ ಊಟಕ್ಕೆ ತರಕಾರಿ ಸ್ಯಾಂಡ್ ವಿಚ್ ಒಳ್ಳೆಯದ್ದಲ್ಲ.

* ಕಡಿಮೆ ಪ್ರೋಟಿನ್ ಯುಕ್ತ ಆಹಾರಗಳು ತೂಕ ಕಳೆದುಕೊಳ್ಳಲು ಸಹಕಾರಿ. ಕೊಂಚ ಪ್ರಮಾಣದಲ್ಲಿ ಚಿಕನ್, ಗಿಣ್ಣು, ಬೇಳೆಕಾಳು ಆಹಾರ ಸೇವಿಸಬಹುದು. ಇವು ಕಾರ್ಬೊಹೈಡ್ರೆಟ್ ಹೆಚ್ಚಿಸಲು ಮತ್ತು ಫ್ಯಾಟನ್ನು ಸ್ನಾಯುಗಳಿಗೆ ಪರಿವರ್ತಿಸಲು ನೆರವಾಗುತ್ತದೆ.

ಪ್ರೋಟಿನ್ ಗೆ ಹಸಿವನ್ನು ಹೆಚ್ಚಿಸುವ ಶಕ್ತಿಯಿದೆ. ಹಾಗಂತ ಹಸಿವಾಗುತ್ತೆ ಅಂತ ಹೆಚ್ಚು ತಿನ್ನಬೇಡಿರಿ. ಮಿತವಾಗಿ ಮಧ್ಯಾಹ್ನದ ಊಟ ಮಾಡಿ. ದಾಲ್ ಸೂಪನ್ನೂ ಕುಡಿಯಬಹುದು.

* ತೂಕ ಕಳೆದುಕೊಳ್ಳಲು ಹಣ್ಣು ಮತ್ತು ತರಕಾರಿಗಳು ಸೂಕ್ತ. ಇದರಲ್ಲಿ ವಿಟಮಿನ್ ಅಂಶಗಳು ಸಾಕಷ್ಟಿರುವುದರಿಂದ ಮಧ್ಯಾಹ್ನದ ಊಟಕ್ಕೆ ಹಣ್ಣು ಮತ್ತು ತರಕಾರಿಗಳನ್ನು ಬಳಸಿರಿ.

ಕ್ಯಾರೆಟ್, ಪಾಲಕ್ ಸೊಪ್ಪು ಇತ್ಯಾದಿಗಳು, ಚೆರ್ರಿ, ಕಿತ್ತಲೆ, ಆಪಲ್ ಮುಂತಾದ ಹಣ್ಣುಗಳನ್ನು ತಿನ್ನಿರಿ. ಇದು ನಿಮ್ಮ ಹಲ್ಲುಗಳ ಆರೋಗ್ಯಕ್ಕೂ ಸಹಕಾರಿ.

 .

No comments:

Post a Comment