Sunday, September 30, 2012

ಮೊಬೈಲ್‌ ನೀರಿಗೆ ಬಿದ್ರೆ ಸರಿಪಡಿಸೋದು ಹೇಗೆ?






ಸಾವಿರಾರು ರುಪಾಯಿ ಹಣ ನೀಡಿ ತಂದಂತಹ ಮೊಬೈಲ್‌ ಫೊನ್‌ ಅಕಸ್ಮಾತ್‌ ಆಗಿ ನೀರಿಗೆ ಬಿದ್ದರೆ ಏನು ಮಾಡುವುದು?.. ಅಂದಹಾಗೆ ನೀವು ಕೂಡ ಇಂತಹ ಸಮಸ್ಯೆ ಎದುರಿಸಿದ್ದಲ್ಲಿ ಮುಂದೆ ಎಂದಾದರು ನಿಮ್ಮ ಮೊಬೈಲ್‌ ಮತ್ತೊಮ್ಮೆ ನೀರಿಗೆ ಬಿದ್ದಲ್ಲಿ ಈ ರೀತಿ ಮಾಡಿ ನಿಮ್ಮ ಮೊಬೈ ಹಾಳಾಗದೆ ಮತ್ತೆ ಕಾರ್ಯ ನಿರ್ವಹಿಸುತ್ತದೆ.
ಸ್ಟೆಪ್‌ 1: ಮೊದಲಿಗೆ ನಿಮ್ಮ ಮೊಬೈಲ್‌ ಫೊನ್‌ ಅನ್ನು ಸ್ವುಚ್‌ ಆಪ್‌ ಮಾಡಿ. ಫೋನ್‌ ವದ್ದೆಯಾಗಿರುವಾಗ ಎಂದಿಗೂ ಆನ್‌ ಮಾಡಲು ಪ್ರಯತ್ನಿಸ ಬೇಡಿ ಶಾರ್ಟ್‌ ಸರ್ಕ್ಯೂಟ್‌ ಆಗುವ ಸಾಧ್ಯತೆ ಇರುತ್ತದೆ.ಸ್ವಿಚ್‌ ಆಫ್‌ ಮಾಡಿದ ನಂತರ ಬ್ಯಾಟರಿ, ಸಿಮ್‌ ಕಾರ್ಡ್‌ ಹಾಗು ಮೆಮೊರಿ ಕಾರ್ಡ್‌ ತೆಗೆಯಿರಿ.
ಸ್ಟೆಪ್‌ 2: ನಿಮ್ಮ ಬಳಿ ಟಿಶ್ಶು ಪೇಪರ್‌ ಇದ್ದಲಿ ಮೊಬೈಲ್‌ನ ಮೇಲ್ಭಾಗದಲ್ಲಿ ಕಾಣಿಸುತ್ತಿರುವ ನೀರನ್ನು ಒರಿಸಿ. ಈ ರೀತಿ ಮಾಡುವಾಗ ಎಚ್ಚರಿಕೆ ಅಗತ್ಯವಾಗಿದೆ ಏಕೆಂದರೆ ಟಿಶ್ಶು ಪೇಪರ್‌ ಬಹುಬೇಗನೆ ನೀರನ್ನು ಹೀರಿಕೊಳ್ಳುವುದರಿಂದ ಮೊಬೈಲ್‌ ಮೇಲೆ ಪೇಪರ್‌ ಉಜ್ಜಬೇಡಿ ಇದರಿಂದ ಫೋನ್‌ನ ಚಿಪ್‌ನಲ್ಲಿ ಪೇಪರ್‌ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ.
ಸ್ಟೆಪ್‌ 3: ಈಗ ಒಂದು ಬಟ್ಟಲಿನಲ್ಲಿ ಅಕ್ಕಿಯನ್ನು ತುಂಬಿಕೊಳ್ಳಿ ನಂತರ ಬಟ್ಟಲಿನಲ್ಲಿ ನಿಮ್ಮ ಬ್ಯಾಟರಿ, ಸಿಮ್‌ ಹಾಗೂ ಮೊಬೈಲ್‌ ಫೋನ್‌ ಇಡಿ. ಅಂದಹಾಗೆ ಫೋನ್‌ಅನ್ನು ಅಕ್ಕಿಯಿಂದ ಸ್ವಲ್ಪ ಹೊರಭಾಗದಲ್ಲಿಡಿ. ನಂತರ ನಿಮ್ಮ ಬಟ್ಟಲ್ಲನ್ನು ಸ್ವಲ್ಪ ಸಮಯ ಬಿಸಿಲಿನಲ್ಲಿಡಿ ಇದರಿಂದ ನಿಮ್ಮ ಫೋನ್‌ ಹಾಳಾಗುವುದನ್ನು ತಡೆಯಬಹುದಾಗಿದೆ. ಅಕ್ಕಿಯು ಬಿಸಿಯಾದಂತೆ ನಿಮ್ಮ ಮೊಬೈಲ್‌ ಹಾಗೂ ಒಳಗೆ ತುಂಬಿರುವ ನೀರು ಒಣಗಿಹೋಗುತ್ತದೆ.
ಸ್ಟೆಪ್‌ 4: ಸ್ವಲ್ಪ ಸಮಯ ಬಿಸಿಲಿನಲ್ಲಿ ಇಟ್ಟ ಬಳಿಕ ಮೊಬೈಲ್‌ ಹೊರತೆಗೆದು ಸೂಕ್ಷ್ಮವಾಗಿ ಗಮನಿಸಿ ಮೊಬೈಲ್‌ನ ಆಡಿಯೋ ಫೋರ್ಟ್‌ ಹಾಗೂ ಜ್ಯಾಕ್‌ನಲ್ಲಿ ಅಕ್ಕಿಯ ಕಾಳು ಸೇರಿರುವ ಸಾಧ್ಯತೆ ಇರುತ್ತದೆ. ಫೋರ್ಟ್‌ ಹಾಗೂ ಜ್ಯಾಕ್‌ ಪರಿಶೀಲಿಸಿದ ಬಳಿಕ ಸಿಂ ಕಾರ್ಡ್‌ ಹಾಗೂ ಬ್ಯಾಟರೀ ಹಾಕಿ ಮೊಬೈಲ್‌ ಸ್ವಿಚ್‌ ಆನ್‌ ಮಾಡಿ ನಿಮ್ಮ ಮೊಬೈಲ್‌ ಮೊದಲಿನಂತೆ ಕೆಲಸ ಮಾಡಲು ಆರಂಭಿಸುತ್ತದೆ.    courtesy---gizbot.com

1 comment:

  1. Tamanna Bhatia (born 21 December 1989) is an Indian film actress and model, who predominantly appears in Tamil and Telugu-language films. In 2005, she made her acting debut in her only Hindi film so far, Chand Sa Roshan Chehra, before working in the major South Indian film industries.
    vumoo

    ReplyDelete