Monday, May 27, 2013

ಗ್ರಾಚುಟಿ ಲೆಕ್ಕಾಚಾರ ಹೇಗೆ ಮಾಡೋದು?


Posted by: Mahesh 
 How Calculate Gratuity
 1 ಉದ್ಯೋಗದಾತರಿಂದ ಉದ್ಯೋಗಿಗಳಿಗೆ ಸಿಗುವ ಕೊಡುಗೆಗಳಲ್ಲಿ ಗ್ರಾಚುಟಿ ಕೂಡಾ ಒಂದಾಗಿದೆ. ಗ್ರಾಚುಟಿ ಅಧಿನಿಯಮದ ಪ್ರಕಾರ ಉದ್ಯೋಗಿ ನಿವೃತ್ತಿ ಹೊಂದಿದ 1 ತಿಂಗಳ ಒಳಗಾಗಿ ಕಡ್ಡಾಯವಾಗಿ ಗ್ರಾಚ್ಯುಟಿ ಹಣವನ್ನು ಪಾವತಿಸಬೇಕಾಗುತ್ತದೆ. ಉದ್ಯೋಗಿ ತನ್ನ ವೃತ್ತಿ ಬದುಕಿನಲ್ಲಿ ಹಲವಾರು ಬಾರಿ ಉದ್ಯೋಗ ಬದಲಾಯಿಸಬೇಕಾಗುತ್ತದೆ. ಗ್ರಾಚುಟಿ ಪಡೆದು ಉದ್ಯೋಗ ತೊರೆಯಬಹುದಾಗಿದೆ. ಗ್ರಾಚುಟಿ ಅಧಿನಿಯಮ 1972ರ ಪ್ರಕಾರ ಉದ್ಯೋಗಿಯ ಹೆಸರು ಸೇರ್ಪಡೆಗೊಂಡಿದ್ದರೆ, ಹಲವು ವಿಧಾನಗಳಲ್ಲಿ ಗ್ರಾಚುಟಿ ಮೊತ್ತವನ್ನು ಲೆಕ್ಕಾ ಹಾಕಲಾಗುತ್ತದೆ. ಈಗ ಒಬ್ಬ ಉದ್ಯೋಗಿ ಗ್ರಾಚುಟಿ ಪೇಮೆಂಟ್ ಕಾಯ್ದೆ 1972ಗೆ ಒಳಪಟ್ಟಿದ್ದರೆ, 15 ದಿನಗಳ ಸಂಬಳದ ಗ್ರಾಚುಟಿ ಮೊತ್ತವನ್ನು ಉದ್ಯೋಗಿಯ ಅನುಭವದ ವರ್ಷಗಳ ಜೊತೆ ಗುಣಿಸಿ ಲೆಕ್ಕ ಹಾಕಲಾಗುತ್ತದೆ ಸಂಬಳದ ಲೆಕ್ಕದಲ್ಲಿ ಮೂಲ ಸಂಬಳ, ಕೊನೆ ಬಾರಿ ಪಡೆದ ತುಟ್ಟಿಭತ್ಯೆ (DA) ಎಲ್ಲವೂ ಸೇರಿಸಲಾಗುತ್ತದೆ ನಂತರ ಮೊತ್ತವನ್ನು 26ರಿಂದ ಭಾಗಿಸಬೇಕಾಗುತ್ತದೆ. ಉದಾಹರಣೆಗೆ: ಉದ್ಯೋಗಿಗೆ ಮೂಲ ಸಂಬಳ(basic pay) ಪ್ರತಿ ತಿಂಗಳು 10,000 ರು ಸಂಬಳ ಬರುತ್ತಿದೆ ಎಂದುಕೊಳ್ಳೋಣ. ಇದರ ಜೊತೆಗೆ ತುಟ್ಟಿಭತ್ಯೆ(dearness allowance) ಸೇರಿಸಬೇಕು. ಜೊತೆಗೆ 10 ವರ್ಷದ ಅನುಭವ ಸೇರಿಸಿಕೊಳ್ಳಿ. ಗ್ರಾಚುಟಿ = ಕೊನೆ ಬಾರಿ ಪಡೆದ ಸಂಬಳ + 15/26 x ಔದ್ಯೋಗಿಕ ಅನುಭವ ವರ್ಷಗಳು ಈ ಉದಾಹರಣೆಯಂತೆ= 10000x15/26x10 = Rs 57,692 ಒಂದು ವೇಳೆ ಉದ್ಯೋಗಿಯ ಅನುಭವ 4.5 ಅಥವಾ ನಾಲ್ಕು ಮುಕ್ಕಾಲು ವರ್ಷ ಇದ್ದರೆ ಅದನ್ನು ಹತ್ತಿರದ ಸಂಖ್ಯೆಗೆ ರೌಂಡ್ ಆಫ್ ಮಾಡಲಾಗುತ್ತದೆ. ಇದರ ಜೊತೆಗೆ ಸಂಸ್ಥಯಲ್ಲಿ ಉದ್ಯೋಗಿ ನಡೆದುಕೊಂಡ ರೀತಿ, ಉದ್ಯೋಗಿ ಪ್ರಗತಿ ವರದಿ, ಸಂಸ್ಥೆಗೆ ಹಾನಿ ಮಾಡಿದ್ದರೆ ಗ್ರಾಚುಟಿ ಮೊತ್ತ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಗ್ರಾಚುಟಿ ಮೊತ್ತವನ್ನು ಪಡೆಯಲು ಕನಿಷ್ಠ 5 ವರ್ಷಗಳ ಒಂದೇ ಸಂಸ್ಥೆಯನ್ನು ಔದ್ಯೋಗಿಕ ಅನುಭವ ಪಡೆದಿರಬೇಕಾಗುತ್ತದೆ. ಆದರೆ, ಕರ್ತವ್ಯ ನಿರತ ಉದ್ಯೋಗಿ ಮೃತಪಟ್ಟ ಸಂದರ್ಭದಲ್ಲಿ ಒಂದು ವರ್ಷಗಳ ನಿಯಮ ಸಡಿಲಿಕೆಗೆ ಅವಕಾಶವಿದೆ. ನಿವೃತ್ತಿ ಹೊಂದುವ ತನಕ ಉದ್ಯೋಗದಾತರು ಉದ್ಯೋಗಿಗಳಿಗೆ ನೀಡುವ ಉತ್ತಮವಾದ ಸೌಲಭ್ಯವಾಗಿ ಗ್ರಾಚುಟಿ ಬಳಕೆಯಲ್ಲಿದೆ.

ಮನಿ ಲಾಂಡ್ರಿಂಗ್ ಎಂದರೇನು?
 Written by: Bimlesh Singh 
 What Is Money Laundering
 ನಿಮ್ಮ ಮನೆಯಲ್ಲಿ ಬಟ್ಟೆಗಳನ್ನು ಲಾಂಡ್ರಿಗೆ ಕೊಟ್ಟು ಸ್ವಚ್ಛಗೊಳಿಸುತ್ತಿರಲ್ಲ. ಮನಿ ಲಾಂಡ್ರಿಂಗ್ ಕೂಡಾ ಅದೇ ರೀತಿ ಎಫೆಕ್ಟ್ ಹೊಂದಿದೆ. ಲಾಂಡ್ರಿಂಗ್ ಮೂಲಕ ಬಟ್ಟೆಗಳ ಕೊಳಕು ತೆಗೆದು ಶುಭ್ರಗೊಳಿಸುವಂತೆ, ಮನಿ ಲಾಂಡ್ರಿಂಗ್ ಕೂಡಾ ಕಾಳಧನ(ಡರ್ಟಿ ಮನಿ?)ವನ್ನು ಕ್ಲೀನ್ ಆಗಿ ತೋರಿಸುತ್ತದೆ. ಕಾಳಧನ ಎಂದರೆ ಅಕ್ರಮವಾಗಿ ಕೂಡಿಟ್ಟ ಹಣ. ಲಂಚ, ವಂಚನೆ, ಇತರೆ ಕ್ರೈಂಗಳ ಮೂಲಕ ಸಂಗ್ರಹವಾದ ನಗದು ಹಣವನ್ನು ಬ್ಲ್ಯಾಕ್ ಮನಿ ಎನ್ನಬಹುದಾದರೆ ಈ ಬ್ಲ್ಯಾಕ್ ಮನಿಯನ್ನು ವೈಟ್ ಮನಿ ರೀತಿಯಲ್ಲಿ ತೋರಿಸುವುದನ್ನೇ ಮನಿ ಲಾಂಡ್ರಿಂಗ್ ಎನ್ನಲಾಗುತ್ತದೆ. ಕಾಳಧನಕ್ಕೆ ಯಾವುದೇ ತೆರಿಗೆ ಕಟ್ಟುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಜಾರಿ ನಿರ್ದೇಶನಾಲಯ, ತೆರಿಗೆ ಇಲಾಖೆ ಕಣ್ಣಿಗೆ ಬಿದ್ದು ಹಣ ಜಪ್ತಿಯಾಗುವ ಭೀತಿ ಎದುರಾದಾಗ ಡರ್ಟಿ ಮನಿಯನ್ನು ಸ್ವಚ್ಛ ನಗದಾಗಿ ಪರಿವರ್ತಿಸಲು ಮನಿ ಲಾಂಡ್ರಿಂಗ್ ಬಳಸಲಾಗುತ್ತದೆ. ಕರ್ನಾಟಕದಲ್ಲಿ ಗಣಿಗಾರಿಕೆ ದುಡ್ಡು, ಹಲವು ರಾಜಕಾರಣಿಗಳು ಮನಿ ಲಾಂಡ್ರಿಂಗ್ ನಲ್ಲಿ ಭಾಗಿಯಾಗಿರುವ ಬಗ್ಗೆ ಕೇಳಿರುತ್ತೀರಿ. ಇತ್ತೀಚೆಗೆ ಮನಿ ಲಾಂಡ್ರಿಂಗ್ ಖಾಸಗಿ ಬ್ಯಾಂಕಿಂಗ್ ವಲಯವನ್ನು ತಲ್ಲಣಗೊಳಿಸಿದೆ. ಅಕ್ರಮ ಹಣ ಸಂಗ್ರಹ, ರವಾನೆ ತಡೆಗಟ್ಟಲು ನಿಯಂತ್ರಣ ಸಂಸ್ಥೆಗಳು ಕಠಿಣ ಕ್ರಮಗಳನ್ನು ಜರುಗಿಸುತ್ತಿವೆ. ಆದರೆ, ಮನಿ ಲಾಂಡ್ರಿಂಗ್ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಜಾಗತಿಕ ಪಿಡುಗಾಗಿದೆ. ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮವನ್ನು ಬೀರಿದೆ. ಮನಿಲಾಂಡ್ರಿಂಗ್ ಪರಿಣಾಮದ ಬಗ್ಗೆ ಸ್ವಲ್ಪ ತಿಳಿದು ಕೊಳ್ಳೋಣ ಮನಿ ಲಾಂಡ್ರಿಂಗ್ ಆರ್ಥಿಕವಾಗಿ ಭಾರಿ ಪರಿಣಾಮ ಬೀರುತ್ತದೆ. ಲಾಂಡ್ರಿಂಗ್ ಆದ ಹಣಕ್ಕೆ ಯಾವುದೇ ತೆರಿಗೆ ಪಾವತಿ ಆಗಿರುವುದಿಲ್ಲ. ಹೀಗಾಗಿ ಅದು ಲೆಕ್ಕಕ್ಕೆ ಸಿಗುವುದಿಲ್ಲ. ಕಾನೂನು ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳ ಮೂಲಕ ಈ ಹಣ ಎಲ್ಲೆಡೆ ಹರಿದಾಡುತ್ತದೆ. ಆದರೆ, ಮನಿ ಲಾಂಡ್ರಿಂಗ್ ಲಾಭ ಪಡೆಯುತಿರುವ ಕಂಪನಿಗಳು ಅಕಸ್ಮಾತ್ ಸಿಕ್ಕಿಬಿದ್ದರೆ ಅಥವಾ ದಿವಾಳಿಯಾದರೆ ಅಲ್ಲಿಗೆ ಕಥೆ ಮುಗಿದ ಹಾಗೆ ಲೆಕ್ಕ. ಕಂಪನಿಯಾಗಲಿ, ಮನಿ ಲಾಂಡ್ರಿಂಗ್ ಮಾಡಿದ ವ್ಯಕ್ತಿಯಾಗಲಿ ಹೂಡಿಕೆ ಮಾಡಿದ ಹಣ ಯಾವುದೇ ಆರ್ಥಿಕ ಲಾಭ ಸಿಗದೆ ದೇಶಕ್ಕೆ ಹೊರೆಯಾಗುತ್ತದೆ. ತೆರಿಗೆ ಕೂಡಾ ಕಟ್ಟಿಲ್ಲದಿರುವುದರಿಂದ ಅನಗತ್ಯ ಆರ್ಥಿಕ ಹೊರೆ ಭಾರ ಜನ ಸಾಮಾನ್ಯರ ಮೇಲೂ ಬೀಳುತ್ತದೆ. ಮನಿ ಲಾಂಡ್ರಿಂಗ್ ನಿಂದಾಗಿ ಸುಳ್ಳು ಸುಳ್ಳೆ ಬೇಡಿಕೆ ಹೆಚ್ಚಳ ಹಾಗೂ ಪೂರೈಕೆ ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ಆರ್ಥಿಕ ಸಾಮಾಜಿಕ ಸಮತೋಲನ ವ್ಯತ್ಯಯವಾಗುತ್ತದೆ. ದೇಶದ ಜಿಡಿಪಿ, ಆಮದು ರಫ್ತು ಸೇರಿದಂತೆ ಅನೇಕ ಅಂಶಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಹಲವು ಕ್ರಿಮಿನಲ್ ಮೂಲಗಳಿಂದ ಸಂಗ್ರಹವಾದ ಹಣ ಲಾಂಡ್ರಿಂಗ್ ಆದಮೇಲೆ ಇನ್ನಷ್ಟು ಕ್ರಿಮಿನಲ್ ಚಟುವಟಿಕೆಗಳಿಗೆ ಉತ್ತೇಜಿಸುವ ಸಾಧ್ಯತೆ ಅಧಿಕವಾಗಿದೆ. ಯಾವುದೇ ದೇಶವಿರಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮನಿ ಲಾಂಡ್ರಿಂಗ್ ದೊಡ್ಡ ಪಿಡುಗಾಗಿ ಪರಿಣಮಿಸಿದ್ದು, ಭ್ರಷ್ಟಾಚಾರದ ಬೇರಾಗಿ ಎಲ್ಲೆಡೆ ವ್ಯಾಪಿಸುತ್ತಿದೆ.SOURCE----http://kannada.goodreturns.in


Availing of LTC (Leave Travel Concession) in current 

block year


Everyone knows that all central government employees can avail LTC through their respective department and can use this opportunity for travelling to any part India. This concession can be availed in block years.  A block year consists of four calendar years. As far this block year is concerned, this year 2013 is the last year in this particular block year – i.e. 2010-2013.
 
                Employees can use this opportunity this year itself without waiting for an extension in the next year. In the last couple of years the block years were extended for another one year for the benefit of many of our employees who are not utilizing it properly. In JCM Meetings, Trade unions and Federations are demanding more facilities in LTC like Air Travel from anywhere in India. Now employees can travel to Jammu & Kashmir and North Eastern States by air. The government has informed that only about 20% of the employees are utilizing this concession.
 
                Going for vacation to different places with family and friends gives the entire family, a fresh atmosphere.  Mingling with friends and other people in different places nourishes our thoughts and minds. In foreign countries, going for a vacation is encouraged very much. To conclude, all central government employees should grab this golden opportunity to travel to any part our country and can enjoy their vacation.
 
The Union Cabinet today approved the Special Recruitment Drive launched to fill up the backlog in reserved vacancies of the Scheduled Castes (SCs), Scheduled Tribes (STs) and Other Backward Classes (OBCs). . Click here to see the details.

No comments:

Post a Comment